1 Peter 2

ಪವಿತ್ರ ಜನಾಂಗ ಮತ್ತು ಸಜೀವ ಕಲ್ಲು

1ಆದಕಾರಣ
2:1 ಎಫೆ. 4:22, 25, 31; ಕೊಲೊ. 3:8; ಯಾಕೋಬ 1:21:
ಎಲ್ಲಾ ಕೆಟ್ಟತನವನ್ನೂ, ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ಎಲ್ಲಾ ತರದ ದೂಷಣೆಯನ್ನು ವಿಸರ್ಜಿಸಿರಿ.
2
2:2 ಮತ್ತಾ 18:3; 19:14; ಮಾರ್ಕ. 10:15; ಲೂಕ. 18:17; 1 ಕೊರಿ. 14:20:
ಹೊಸದಾಗಿ ಹುಟ್ಟಿದ ಶಿಶುಗಳಂತೆ
2:2 1 ಕೊರಿ. 3:2; ಇಬ್ರಿ. 5:12, 13
ನೀವು ದೇವರ ವಾಕ್ಯವೆಂಬ ಶುದ್ಧವಾದ ಆತ್ಮೀಕ ಹಾಲನ್ನು ಬಯಸಿರಿ. ಆದರಿಂದ ರಕ್ಷಣೆಯಲ್ಲಿ ಬೆಳೆಯುವಿರಿ.
2:2 ಕೀರ್ತ. 34:8:
3ಏಕೆಂದರೆ ಕರ್ತನು ದಯಾಪರನೆಂದು ನೀವು ಅನುಭವಿಸಿ ತಿಳಿದಿದ್ದೀರಿ.

4ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ.
2:4 ವ. 7:
ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ.
5
2:5 ಎಫೆ. 2:20-22; 1 ಕೊರಿ. 3:9:
ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು
2:5 ಇಬ್ರಿ. 3:4, 6:
ಆತ್ಮೀಕವಾದ ಮಂದಿರವಾಗುವುದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ. ಯೇಸು ಕ್ರಿಸ್ತನ ಮೂಲಕ ದೇವರಿಗೆ
2:5 ರೋಮಾ. 15:16; ಫಿಲಿ. 4:18:
ಸಮರ್ಪಕವಾದ
2:5 ಯೆಶಾ. 56:7; ಮಲಾ. 1:11; ರೋಮಾ. 12:1; ಇಬ್ರಿ. 13:15
ಆತ್ಮೀಕ ಯಜ್ಞಗಳನ್ನು ಸಮರ್ಪಿಸುವುದಕ್ಕೆ
2:5 ವ. 9:
ಪವಿತ್ರ ಯಾಜಕ ವರ್ಗದವರಾಗಿದ್ದೀರಿ.

6

2:6 ಯೆಶಾ. 28:16:
<<ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ.
ಅದು ಆರಿಸಿಕೊಳ್ಳಲ್ಪಟ್ಟದ್ದೂ ಮತ್ತು ಅತ್ಯಮೂಲ್ಯವಾದದ್ದೂ.
2:6 ರೋಮಾ. 9:33; 10:11
ಆತನ ಮೇಲೆ ನಂಬಿಕೆಯಿಡುವವನು ಅವಮಾನಪಡುವುದೇ ಇಲ್ಲ>>

ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ.

7ಆದ್ದರಿಂದ ನಂಬುವವರಾದ ನಿಮಗೇ ಈ ಕಲ್ಲು ಅತ್ಯಮೂಲ್ಯವಾದುದು. ಆದರೆ ನಂಬದೆಯಿರುವವರಿಗೆ,

2:7 ಕೀರ್ತ. 118:22; ಅ. ಕೃ. 4:11:
<<ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ
ಮುಖ್ಯವಾದ ಮೂಲೆಗಲ್ಲಾಯಿತು>>

8
2:8 ಯೆಶಾ. 8:14; ರೋಮಾ. 9:33:
ಮತ್ತು ಪವಿತ್ರಗ್ರಂಥದಲ್ಲಿ ಇನ್ನೊಂದೆಡೆ ಬರೆದಿರುವುದೇನಂದರೆ, <<ಅದು ಜನರು ಎಡವುವ ಕಲ್ಲು
ಮುಗ್ಗರಿಸುವ ಬಂಡೆ.>>

ಅವರು ದೇವರ ವಾಕ್ಯಕ್ಕೆ ಅವಿಧೇಯರಾದ್ದರಿಂದ ಎಡವಿ ಬೀಳುತ್ತಾರೆ.
2:8 ರೋಮಾ. 9:22; ಯೂದ. 4:
ಅದಕ್ಕಾಗಿಯೇ ಅವರನ್ನು ನೇಮಿಸಲಾಗಿದೆ.

9
2:9 ಯೆಶಾ. 42:16; ಅ. ಕೃ. 26:18:
ನಿಮ್ಮನ್ನು ಕತ್ತಲೆಯೊಳಗಿನಿಂದ
2:9 ಕೀರ್ತ. 36:9:
ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಅದ್ಭುತಕಾರ್ಯಗಳನ್ನು ಪ್ರಚಾರಮಾಡುವವರಾಗುವಂತೆ
2:9 ಧರ್ಮೋ. 10:15:
ನೀವು ದೇವರಿಂದ ಆರಿಸಿಕೊಳ್ಳಲ್ಪಟ್ಟ ಜನಾಂಗವೂ,
2:9 ವಿಮೋ. 19:6; ಪ್ರಕ. 1:6; 5:10:
ರಾಜವಂಶಸ್ಥರಾದ
2:9 ಯೆಶಾ. 61:6; 66:21:
ಯಾಜಕರೂ,
2:9 ಧರ್ಮೋ. 7:6:
ಪರಿಶುದ್ಧ ಜನಾಂಗವೂ,
2:9 ವಿಮೋ. 19:5, 6; ಯೆಶಾ. 43:21; ಮಲಾ. 3:17; ತೀತ. 2:14:
ದೇವರ ಸ್ವಕೀಯ ಜನರೂ ಆಗಿದ್ದೀರಿ.
10
2:10 ಹೋಶೇ. 1:6, 9, 10; 2:23; ರೋಮಾ. 9:25:
ಮೊದಲು ನೀವು ಪ್ರಜೆಯಾಗಿರಲಿಲ್ಲ. ಈಗಲಾದರೂ ದೇವರ ಸ್ವಕೀಯಪ್ರಜೆಯಾಗಿದ್ದೀರಿ. ಮೊದಲು ನೀವು ಕರುಣೆ ಹೊಂದಿದವರಾಗಿರಲಿಲ್ಲ. ಈಗಲಾದರೂ ಕರುಣೆ ಹೊಂದಿದವರಾಗಿದ್ದೀರಿ.

ದೇವರ ದಾಸರು

11ಪ್ರಿಯರೇ,
2:11 ಯಾಜ. 25:23:
ಪ್ರವಾಸಿಗಳು ಮತ್ತು ಪರದೇಶಸ್ಥರು ಆಗಿರುವ ನೀವು
2:11 ಯಾಕೋಬ 4:1:
ನಿಮ್ಮ ಆತ್ಮದ ವಿರುದ್ಧವಾಗಿ ಯುದ್ಧ ಮಾಡುವ
2:11 ರೋಮಾ. 13:14; ಗಲಾ. 5:24:
ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
12
2:12 1 ಪೇತ್ರ. 3:16; ಫಿಲಿ. 2:15; ತೀತ. 2:8:
ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ
2:12 ಮತ್ತಾ 5:16; 2 ಕೊರಿ. 9:13; ಗಲಾ. 1:24:
ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು
2:12 ಅಥವಾ, ದೇವರ ದರ್ಶನಕೊಡುವ ದಿನದಲ್ಲಿ.
ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.

13
2:13 ರೋಮಾ. 13:1; ತೀತ. 3:1:
ಮನುಷ್ಯರು ನೇಮಿಸಿರುವ ಪ್ರತಿಯೊಂದು ಅಧಿಕಾರಕ್ಕೂ ಕರ್ತನ ನಿಮಿತ್ತ ನೀವು ಅಧೀನರಾಗಿರಿ. ಸರ್ವಾಧಿಕಾರಿಯಾಗಿರುವ ಅರಸನಿಗಾಗಲಿ
14ಅಥವಾ ಅರಸನಿಂದ
2:14 ರೋಮಾ. 13:3, 4:
ಕೆಟ್ಟ ನಡತೆಯುಳ್ಳವರನ್ನು ದಂಡಿಸುವುದಕ್ಕೂ ಒಳ್ಳೆ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವುದಕ್ಕೂ ಕಳುಹಿಸಲ್ಪಟ್ಟಂಥ ಅಧಿಪತಿಗಳಿಗಾಗಲಿ ನೀವು ಅಧೀನರಾಗಿರಿ.
15ತಿಳುವಳಿಕೆಯಿಲ್ಲದೆ ಮಾತನಾಡುವ ಮೂಢ ಜನರ ಬಾಯನ್ನು
2:15 ವ. 12:
ನೀವು ಒಳ್ಳೆ ನಡತೆಯಿಂದ ಮುಚ್ಚಿಸಬೇಕೆಂಬುದು ದೇವರ ಚಿತ್ತ.
16
2:16 ಯಾಕೋಬ 1:25:
ಸ್ವತಂತ್ರರಂತೆ ನಡೆದುಕೊಳ್ಳಿರಿ, ಆದರೆ ಕೆಟ್ಟತನವನ್ನು ಮರೆಮಾಡುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಡಿರಿ, ಆದರೆ
2:16 1 ಕೊರಿ. 7:22; ರೋಮಾ. 6:22:
ನೀವು ದೇವರ ದಾಸರಂತೆ ನಡೆದುಕೊಳ್ಳಿರಿ.
17
2:17 ರೋಮಾ. 12:10; 13:7:
ಎಲ್ಲರನ್ನೂ ಸನ್ಮಾನಿಸಿರಿ.
2:17 ಇಬ್ರಿ. 13:1:
ಸಹೋದರರನ್ನು ಪ್ರೀತಿಸಿರಿ.
2:17 ಜ್ಞಾ. 24:21:
ದೇವರಿಗೆ ಭಯಪಡಿರಿ. ಅರಸನನ್ನು ಗೌರವಿಸಿರಿ.

ಕ್ರಿಸ್ತನ ಶ್ರಮೆಗಳ ಆದರ್ಶ

18
2:18 ಎಫೆ. 6:5; ಕೊಲೊ. 3:22; 1 ತಿಮೊ. 6:1; ತೀತ. 2:9:
ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಗೌರವದಿಂದ ಅಧೀನರಾಗಿರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯರಾಗಿರಿ.
19
2:19 1 ಪೇತ್ರ. 3:14, 17; 4:16:
ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ.
20ತಪ್ಪುಮಾಡಿ ಗುದ್ದು ತಿನ್ನುವುದರಲ್ಲಿ ನೀವು ಸಹಿಸಿಕೊಂಡರೆ ಅದರಿಂದೇನು ಕೀರ್ತಿ?
2:20 1 ಪೇತ್ರ. 3:17, 18; 4:13, 16:
ಆದರೆ ಒಳ್ಳೆಯದನ್ನು ಮಾಡಿ ಬಾಧೆಪಡುವುದರಲ್ಲಿ ನೀವು ಸಹಿಸಿಕೊಂಡರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ.

21
2:21 1 ಪೇತ್ರ. 3:9; ಅ. ಕೃ. 14:22:
ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ
2:21 ಮತ್ತಾ 11:29; ಯೋಹಾ. 13:15; ಫಿಲಿ. 2:5:
ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.
22
2:22 ಯೆಶಾ. 53:9; ಯೋಹಾ 8:46; 2 ಕೊರಿ. 5:21; ಇಬ್ರಿ. 4:15; 1 ಯೋಹಾ. 3:5:
ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.
23
2:23 1 ಪೇತ್ರ. 3:9; ಯೆಶಾ. 53:7; ಇಬ್ರಿ. 12:3:
ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ,
2:23 ಲೂಕ. 23:46:
ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.

24
2:24 ರೋಮಾ. 6:2, 11; 7:4, 6; ಕೊಲೊ. 2:20; 3:3:
ನಾವು ಪಾಪದ ಪಾಲಿಗೆ ಸತ್ತು
2:24 ರೋಮಾ. 6:13:
ನೀತಿವಂತರಾಗಿ ಜೀವಿಸುವಂತೆ
2:24 ಯೆಶಾ. 53:4, 11 ಮತ್ತಾ 8:17; ಇಬ್ರಿ. 9:28:
ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು.
2:24 ಯೆಶಾ. 53:5:
ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು.
2:25 ಯೆಶಾ. 53:6; ಕೀರ್ತ. 119:176; ಯೆಹೆ. 34:6; ಮತ್ತಾ 9:36; ಲೂಕ. 15:4:
ನೀವು ದಾರಿತಪ್ಪಿದ ಕುರಿಗಳಂತೆ ಇದ್ದವರು. ಆದರೆ ಈಗ ನೀವು ತಿರುಗಿಕೊಂಡು
2:25 ಯೋಹಾ. 10:11:
ನಿಮ್ಮ ಆತ್ಮಗಳ ಕುರುಬನೂ ಪಾಲಕನೂ ಆಗಿರುವಾತನ ಬಳಿಗೆ ಬಂದಿದ್ದೀರಿ.

25

Copyright information for KanULB